ವೆಲ್ವೆಟ್ ಗಿಡ ಅಮರಾಂತೇಸೀ ಕುಟುಂಬದ ಸಿಲೋಸಿಯಾ ಕ್ರಿಸ್ಟೆಟಾ ಎಂಬ ಸಸ್ಯ. ಅಲಂಕಾರಕ್ಕಾಗಿ ಮನೆಯ ಕೈತೋಟ ಮತ್ತು ಉದ್ಯಾನವನಗಳಲ್ಲಿ ಬೆಳೆಸಲಾಗುತ್ತದೆ. ಇದಕ್ಕೆ ಸಂಸ್ಕೃತದಲ್ಲಿ ಮಯೂರಶಿಖ ಎಂದು ಹೆಸರು. ಸಮತಟ್ಟಾದ ಪ್ರದೇಶಗಳಲ್ಲಿ ಮತ್ತು ಸುಮಾರು 1500 ಮೀ ಎತ್ತರದವರೆಗೆ ಹಿಮಾಲಯ ಪ್ರದೇಶದಲ್ಲಿ ಬೆಳೆಯುತ್ತದೆ. == ಸಸ್ಯ ವಿವರಣೆ == ಇದರಲ್ಲಿ ವಿವಿಧ ಆಕಾರಗಳ, ವಿಚಿತ್ರ ರೂಪಗಳ ಹೂಗೊಂಚಲುಗಳಿರುವುವು. ಒಂದೊಂದು ಗೊಂಚಲಿನಲ್ಲಿಯೂ ಅಸಂಖ್ಯ ಹೂಗಳುಂಟು. ಸಾಮಾನ್ಯವಾಗಿ 1-2 ಮೀ ಎತ್ತರಕ್ಕೆ ಬೆಳೆಯುವ ಈ ಸಸ್ಯದಲ್ಲಿ ಪ್ರತಿ ಗೆಣ್ಣಿನಲ್ಲಿಯೂ ಒಂದು ಎಲೆ ಇದೆ. ಕಾಂಡದ ತುದಿಯಲ್ಲಿ ಹೂಗೊಂಚಲಿದೆ. ಹೂ ದಳಗಳು ಒಂದು ಸುತ್ತಿನಲ್ಲಿರುತ್ತವೆ. ಮೊದಲ ಸುತ್ತಿನ ಕೇಸರಗಳು 5 ಹಾಗೂ ಎರಡನೆಯ ಸುತ್ತಿನ ಬಂಜೆ ಕೇಸರಗಳು ಒಟ್ಟಿಗೆ ಸೇರಿ ಬಟ್ಟಲಿನಂತಾಗುತ್ತವೆ. ಅಂಡಾಶಯ 2 ಶಲಾಕಾಶಯಗಳಿಂದಾಗಿರುವುದು. ಹೂಗಳು ಫಲಿತಗೊಂಡ ಅನಂತರ ಯುಟ್ರಿಕಲ್ (ಹಣ್ಣು) ಬಿಡುತ್ತವೆ. == ಉಪಯೋಗಗಳು == ಈ ಗಿಡದ ಎಲೆಗಳನ್ನು ಆಹಾರವಾಗಿ ಬಳಸುತ್ತಾರೆ. ಕಾಂಡದಲ್ಲಿರುವ ರಬ್ಬರಿನಂಥ ನಾರುಗಳಿಂದ ಹಗ್ಗಗಳನ್ನು ತಯಾರಿಸುತ್ತಾರೆ. ಬೀಜಗಳನ್ನು ಮೂತ್ರರೋಗ ಮತ್ತು ಕಫಶಾಮಕವಾಗಿಯೂ ಬಳಸಲಾಗುತ್ತದೆ. == ಛಾಯಾಂಕಣ == == ಉಲ್ಲೇಖಗಳು ==